ಲಿಂಗಸುಗೂರು —ತಾಲೂಕಿನ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪುರಸಭೆ, ಲಿಂಗಸುಗೂರು ಇವರು ಸಂಯುಕ್ತಾಶ್ರಯದಲ್ಲಿ ಇಂದು ರಾಷ್ಟ್ರೀಯ ಸ್ವಚ್ಛತಾ ದಿನ ಭಾರತದಲ್ಲಿ ಪ್ರತಿವರ್ಷ ಜನವರಿ 30 ರಂದು ‘ರಾಷ್ಟ್ರೀಯ ಸ್ವಚ್ಛತಾ ದಿನ’ವನ್ನು ನ್ಯಾಯಾಲಯದ ಸಂಕೀರ್ಣ ಮತ್ತು ವಕೀಲರ ಭವನ ಸುತ್ತಮೂತ್ತ ಸ್ವಚ್ಛ ಮಾಡುವದರ ಮೂಲಕ ಆಚರಿಸಲಾಯಿತು. ಕೆಲಸದ ಸ್ಥಳ, ಮನೆಗಳು ಅಥವಾ ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು, ಉದ್ಯಾನವನಗಳು ಇತರ ಸಾರ್ವಜನಿಕ ಸ್ಥಳಗಳಲ್ಲೂ ಸ್ವಚ್ಛತೆ ಕಾಪಾಡಲು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇಂದು ‘ರಾಷ್ಟ್ರೀಯ ಸ್ವಚ್ಛತಾ ದಿನ ಮಹಾತ್ಮ ಗಾಂಧಿ ಕಂಡ ಸ್ವಚ್ಛ ಭಾರತದ ಕನಸು ನನಸು ಮಾಡಲು ಪ್ರತಿಯೊಬ್ಬ ನಾಗರೀಕನು ಮುಂದಾಗಬೇಕಿದೆ ಎಂದು ಹೇಳಿದರು, ಈ ಸಂದರ್ಬದಲ್ಲಿ ಭೂಪನಗೌಡ ಪಾಟೀಲ್, ಅಧ್ಯಕ್ಷರು ವಕೀಲರ ಸಂಘ, ಲಿಂಗಸುಗೂರು, ನಟರಾಜ ಮುಖ್ಯಾಧಿಕಾರಿಗಳು ಪುರಸಭೆ ಲಿಂಗಸುಗೂರು, ಬಸಲಿಂಗಪ್ಪ ವಕೀಲರು, ಬಾಲರಾಜ ಸಾಗರ ಮಾನಮಟ್ಟಿ ವಕೀಲರು, ದೇವೆಂದ್ರ ನಾಯಕ ವಕೀಲರು, ಹನುಮಂತ ರೆಡ್ಡಿ ವಕೀಲರು, ಹಾಗೂ ಪುರಸಭೆ ಅಧಿಕಾರಿಗಳು, ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳು, ನ್ಯಾಯಾಲಯದ ಎಲ್ಲ ಸಿಬ್ಬಂದಿಗಳು, ವಕೀಲರು ಭಾಗವಹಿಸಿದ್ದರು.
